ವಾರ ಭವಿಷ್ಯ (12-05-2008 - 19- 05 -2008)

  • ಮೇಷಮೇಷ

    ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವುದು. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಮಿಶ್ರ ಫಲ ಲಭಿಸುತ್ತದೆ. ಶುಭ ವಾರ್ತೆ ಕೇಳುವಿರಿ. ಪ್ರೀತಿಪಾತ್ರರೊಂದಿಗಿನ ಭಿನ್ನಾಭಿಪ್ರಾಯ ಕೊನೆಗೊಳ್ಳುವುದು. ಜನಪ್ರಿಯತೆ ಹೆಚ್ಚಳ ಸಾಧ್ಯತೆಗಳೂ ಬಲವಾಗಿವೆ. ಕೆಲ ವು ಶುಭ ಸುದ್ದಿಗಳನ್ನು ಕೇಳುವಿರಿ.ನೀವು ಸಾಧಿಸಬೇಕೆಂದಿರುವ ವೃತ್ತಿ ಗುರಿಗಳತ್ತ ನೀವು ಕಣ್ಣುಹಾಯಿಸಲಿದ್ದೀರಿ.

  • ವೃಷಭವೃಷಭ

    ನಿಮ್ಮ ಇಚ್ಛೆಯ ಯೋಜನೆಗಳು ಮತ್ತು ವ್ಯವಹಾರಗಳಲ್ಲಿ ಯಶಸ್ಸು ಕಾಣುತ್ತೀರಿ. ನಿಮ್ಮ ಆಕಾಂಕ್ಷೆಗಳು ಹೆಚ್ಚಾಗುತ್ತಿರುವುದನ್ನು ಕಾಣು ತ್ತೀರಿ. ದೃಢ ನಿಶ್ಚಯ ಮತ್ತು ವಿಶ್ವಾಸವು ನಿಮ್ಮ ಕಾರ್ಯಪಾಲನೆಗೆ ಮತ್ತಷ್ಟು ಪುಷ್ಟಿ ನೀಡುತ್ತವೆ, ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳಉ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ.

  • ಮಿಥುನಮಿಥುನ

    ಹೊಸ ಸಮಸ್ಯೆಗಳು ಸೃಷ್ಠಿಯಾಗದಂತೆ ಎಚ್ಚರವಹಿಸಿ. ಬಂಧುಗಳಲ್ಲಿ ,ಸಹೋದರರಲ್ಲಿ ಆತ್ಮಿಯತೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಪ್ರಗತಿ ಹೊಸ ವ್ಯಾಪಾರಗಳಿಗೆ ಶುಕ್ರದೆಸೆ. ಸ್ತ್ರೀಯರಿಗೆ ವಸ್ತ್ರಲಾಭ ಸಾಧ್ಯತೆ. ಉದ್ಯೋಗಿಗಳಿಗೆ ಅಧಿಕಾರಿಗಳಿಂದ ಪ್ರಶಂಸೆ. ಪತ್ರಿಕೆ ಮತ್ತು ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ವರ್ಗಾವಣೆ ಸಂಭವ. ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ.

  • ಕಟಕಕಟಕ

    ಮಿತ್ರರು ನಿಮ್ಮನ್ನು ಬೆಂಬಲಿಸುವರು. ಶುಭ ವಾರ್ತೆ ಕೇಳುವಿರಿ. ಚರ್ಚೆಗಳಲ್ಲಿ ನೀವು ಜಯಿಸುವಿರಿ ಮತ್ತು ವಿರೋಗಳಿಗೆ ಸೋಲು ಕಾದಿದೆ. ಆರೋಗ್ಯವು ಯಾವುದೇ ಚಿಂತೆಗೆ ಕಾರಣವಾಗದು. ವಿರುದ್ಧ ಲಿಂಗದವರ ಮೇಲೆ ಒಂದು ರೀತಿಯ ಪ್ರಬಲ ಆಕರ್ಷಣೆ ಅನು ಭವಿಸುತ್ತೀರಿ. ನಿಮ್ಮ ಸಂಗಾತಿ ಮತ್ತು ವಿರುದ್ಧ ಲಿಂಗಿಯಿಂದ ಅಮೂಲ್ಯ ನೆರವು ದೊರಕುತ್ತದೆ.

  • ಸಿಂಹಸಿಂಹ

    ಹಣಕಾಸಿನ ಕೊರತೆ ಎದುರಿಸಬೇಕಾಗಬಹುದು. ದೀರ್ಘ ಪ್ರಯಾಣವೊಂದರ ಸಾಧ್ಯತೆ ಇದೆ. ಎಲ್ಲಾ ಕ್ಷೇತ್ರಗಳಲ್ಲಿ ನಿಮಗೆ ಮಿಶ್ರ ಫಲ ಲಭಿಸುತ್ತದೆ. ನಿಮ್ಮ ಮಿತ್ರರ ಸಹಾಯದಿಂದ ನಿಮ್ಮ ಜನಪ್ರಿಯತೆ ಹೆಚ್ಚಾಗಬಹುದು. ನಿಮ್ಮ ವ್ಯಾಪಾರ-ವ್ಯವಹಾರಗಳು ಸುಲಲಿತ ವಾಗಿ ಸಾಗುತ್ತವೆ. ನಿಮ್ಮ ಮನಸ್ಸಿನಲ್ಲಿರುವ ಹೊಸ ಯೋಜನೆಗಳ ಬಗ್ಗೆ ಈಗಾಗಲೇ ನೀವು ಉತ್ತೇಜಿತರಾಗಿದ್ದೀರಿ.

  • ಕನ್ಯಾಕನ್ಯಾ

    ಪರಿಸ್ಥಿತಿಗಳು ಇಂದು ನಿಮ್ಮ ಕಡೆ ವಾಲುತ್ತವೆ ಮತ್ತು ನಿಮ್ಮ ವೈಯಕ್ತಿಕ ಪ್ರಗತಿಗಾಗಿ ಹೊಸ ಮಾರ್ಗಗಳು ಗೋಚರಿಸಲಿವೆ ಆರೋಗ್ಯ ಉತ್ತಮವಾಗಿರುತ್ತದೆ. ಮುಂಬರುವ ದಿನಗಳಲ್ಲಿ ನಿಮಗೆ ಅನುಕೂಲವಾಗಬಲ್ಲ ಗಣ್ಯ ವ್ಯಕ್ತಿಯೊಬ್ಬರನ್ನು ಭೇಟಿಯಾಗುವ ಸಾಧ್ಯತೆ ಇದೆ. ಪ್ರಾಮಾಣಿಕ ಮತ್ತು ಯೋಜಿತ ಯತ್ನಗಳು ನಿಮಗೆ ಯಶಸ್ಸು ಮತ್ತು ಆನಂದವನ್ನು ದಯಪಾಲಿಸುತ್ತದೆ.

ಇನ್ನಷ್ಟು...